ಇದು ಹೊಸ ವರ್ಷ ನ??

ಮೊದಲನೆಯ ಬಾರಿ ನಾನು ಕನ್ನಡದಲ್ಲಿ ಬ್ಲಾಗ್ ಬರಿತಾಯಿದ್ದಿನಿ. ಈಗೀಗ ಬ್ಲಾಗ್ ಬರಿಯುವುದೇ ಒಂದು ಪಾಸ್ಟ್ ಟೈಮ್ ಆಗೋಗಿದೆ ನನಗೆ. ಹೊಸ ವರ್ಷ ಬಂದಿದೆ.. ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡಿ, ಒಳ್ಳೆಯದನ್ನು ಯೋಚಿಸಿ, ಕೆಟ್ಟದನ್ನು ಮರೆತು ಸದಾ ಜೀವನ ಸುಖಿಯಗಿರಲಿ ಅಂಥ ದೊಡ್ಡವರು ಹೇಳಿದ್ದರೆ. ಅಯ್ಯೋ ಇದು ಯುಗಾದಿ ಅಂಥ ತಪ್ಪು ತಿಳಿಬೇಡಿ...ನಿಜ ಹೇಳ್ಬೇಕು ಅಂದ್ರೆ ಯುಗಾದಿ ಆಗಿದ್ರೆನೇ ಎಷ್ಟೂ ಚೆನ್ನಾಗಿರೋದು. ಏನಿಲ್ಲ ಅಂದ್ರು ಒಂದು ಸೆಟ್ ಬಟ್ಟೆಯದರೋ ಸಿಕ್ಕಿರೋದು, ಮನೇಲಿ ಹಬ್ಬದ ಊಟ ಅದು ಬಳೆಯಲೆಯಲ್ಲಿ..ಆಹಾಹಾಹ!! ಯಾರಿಗುಂಟು ಯಾರಿಗಿಲ್ಲ. ನಿಮಗೊಂದು ನಿಜ ಹೇಳ್ತಿನಿ ಕೇಳಿ..ಇದು ವರೆಗೂ ನೀವು ಬಾಳೆ  ಎಲೆಯಲ್ಲಿ ಊಟ ಮಾಡಿಲ್ಲ ಅಂದ್ರೆ ನಿಮ್ ಜೀವನಾನೆ ವೇಸ್ಟು! ಕೆಳಗೆ ನೆಲದ ಮೇಲೆ ಕುತ್ಕೊಂಡು ಮನೆಯವರೆಲ್ಲ ನಗ್ತಾ ನಗ್ತಾ ಮಾತಾಡ್ಕೊಂಡು ಊಟ ಮಾಡೋದರಲ್ಲಿ ಇರೋ ಮಜಾ ಯಾವುದರಲ್ಲೂ ಇಲ್ಲ. ಮನೆಯಲ್ಲಾ ಘಮ್ ಅಂಥ ಇಂಗ್ ವಾಸನೆ, ಹಪ್ಪಳ ಮಾಡಿಯಿಟ್ಟಿದ್ದರೆ ನನ್ನ ಹೊಟ್ಟೆಗೆ ಆಗಲೇ ಒಂದ್ ಎರಡು ಹೊರಟು ಹೋಗಿರತ್ತೆ, ಕೋಸಂಬರಿ, ಅದು ಬೇರೆ ನಮ್ಮ ಮನೆಯಲ್ಲಿ ಎರಡು ರೀತಿ ಮಾಡುತ್ತಾರೆ, ಇವಾಗ ನೆನಪಿಸಿಕೊಂಡರೆ ಬಾಯಲ್ಲಿ ನೀರು ಸುರಿಯತ್ತೆ!! ಅಕಸ್ಮಾತ್ ಬಿಸಿಬೇಳೆ ಬಾತ್ ಮಾಡಿದರಂತೂ ಒಹ್ಒಹೊಹ್ !! ಸಿಹಿ ತಿನಿಸುಗಳು ಎಷ್ಟು ಇರತ್ತೆ ಗೊತ್ತಾ..ಜಾಮೂನು, ಶಾವಿಗೆ ಪಾಯಿಸ, ಸಕ್ಕರೆ ಹೋಳಿಗೆ, ಬೇಳೆ ಹೋಳಿಗೆ, ಯಾವಾಗದ್ರು ಒಂದ್ ಸಾರ್ತಿ ಡ್ರೈ ಜಾಮೂನು. 






ನಮ್ಮ ಮನೇಲಿ ಕೂಟು ಮಾಡ್ತಾರೆ, ಕ್ಯಾರೆಟ್, ಹುರಳಿಕಾಯಿ, ಆಲುಗಡ್ಡೆ, ಗೋರಿಕಾಯಿ, ಗೆಣಸು, ಫುಲ್ ಮಿಕ್ಸ್ ಮಾಡಿ ಹಾಕ್ತಾರೆ. ಏನ್ ರುಚಿ ಅಂತಿರ, ಅಮ್ಮನ ಕೈ ಅಡಿಗೆ A1!! ಈಗ ಆಚರಿಸುತ್ತಿರುವ ಹೊಸ ವರ್ಷ ಯುಗಾದಿ ಮುಂದೆ ಏನು ಇಲ್ಲ ಬಿಡಿ. ಸುಮ್ನೆ ನಾಮಕಾವಸ್ತೆಗೆ ಹೊಸ ವರ್ಷ. ಮನೆಯಲ್ಲಿ ಸಿಹಿ ಇಲ್ಲ ಖಾರ ಇಲ್ಲ. Hmmm...ಏನ್ ಹೊಸ ವರ್ಷ ನೋ ಏನೋ ನಾ ಕಾಣೆ. ನಿಜ ಹೇಳ್ತಿನಿ ಈ ಬ್ಲಾಗ್ ಬರಿ ಬೇಕಾದರೆ   ನನಗಾದ ಅನುಭವ ಮಾತ್ರ ಅಮೋಘ.

(ಈ ಬ್ಲಾಗ್ ಅಲ್ಲಿ ಬರೆದಿರುವ ಕನ್ನಡ ನಾನು ಮಾತಾಡುವ ಶೈಲಿಯ ಪ್ರಕಾರವಾಗಿದೆ..)

2 comments:

Karthik B.S. said...

Really a great effort dude.. Keep it up..

moorthy said...

kannadalli bardirodakke khushi tandide...