ಓ ಮೌನವೇ ನೀ ಮಾತಾಡು!
ನನ್ನ ಕೊಲ್ಲುವುದ ಸಾಕು ಮಾಡು
ಓ ಮೌನವೇ ನೀ ಮಾತಾಡು!
ತೆರೆದು ನಿನ್ನ ತುಟಿಯಂಚು,
ಮಾತಾಗಲಿ ನಿನ್ನ ಮೌನ,
ಹಾಡಾಗಲಿ ನಿನ್ನ ಮಾತು,
ಆ ಹಾಡಲ್ಲಿ ನನ್ನೆದೆಗೆ ಒಲವಿನ ಭಾವ ಇರಲಿ,
ಪ್ರೀತಿ ಪ್ರಣಯದ ರಾಗವಿರಲಿ!
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು
ಕೇಳಿ ಆ ನಿನ್ನ ಹಾಡು ಮೆಚ್ಚಲಿ ನಾಡು
ನನ್ನೆದೆಯ ಮರುಭೂಮಿಯಾಗಲಿ ಹಸಿರು ಕಾಡು
ನಿನ್ನೊಲುಮೆ ಇಂದಲೆ ನನಗೆ ಈ ಪಾಡು
ಓ ಮೌನವೇ ನೀ ಮಾತಾಡು!
ಓ ಗೆಳತಿ ಹೇಳು.. ಗುಟ್ಟಾಗಿ ನನಗೆ ಹೇಳು
ಎಂದು ತೊರೆಯುವೆ ಆ ನಿನ್ನ ಮೌನ?
ಎಂದು ಹಾಡಾಗುವುದು ಆ ನಿನ್ನ ಮಾತು?
ಇದನು ನೀ ಹೇಳುವವರೆಗೂ ನೆಮ್ಮದಿಯಾಗಿ
ನಿದ್ರಿಸೆನು ನಾನಂತು..!!